1. الرئيسية
  2. التصنيفات
  3. ಫಿಕ್ಹ್ ಮತ್ತು ಉಸುಲ್-ಎ-ಫಿಖ್

حديث “ನೀವು ಇಚ್ಚಿಸುವುದಾದರೆ ನಾನು ನಿಮಗೆ ನೀಡುತ್ತೇನೆ. (ಆದರೆ) ಇದರಲ್ಲಿ ಶ್ರೀಮಂತನಿಗೆ ಅಥವಾ ದುಡಿಯಲು ಶಕ್ತನಾಗಿರುವ ಬಲಿಷ್ಠನಿಗೆ ಯಾವುದೇ ಪಾಲಿಲ್ಲ

عَنْ عُبَيْدِ اللَّهِ بْنِ عَدِيِّ بْنِ الخِيَارِ قَالَ:
أَخْبَرَنِي رَجُلَانِ أَنَّهُمَا أَتَيَا النَّبِيَّ صَلَّى اللهُ عَلَيْهِ وَسَلَّمَ فِي حَجَّةِ الوَدَاعِ وَهُوَ يُقَسِّمُ الصَّدَقَةَ، فَسَأَلَاهُ مِنْهَا، فَرَفَّعَ فِينَا البَصَرَ وَخَفَّضَهُ، فَرَآنَا جَلْدَيْنِ، فَقَالَ: «إِنَّ شِئْتُمَا أَعْطَيْتُكُمَا، وَلَا حَظَّ فِيهَا لِغَنِيٍّ، وَلَا لِقَوِيٍّ مُكْتَسِبٍ».

ಉಬೈದುಲ್ಲಾ ಬಿನ್ ಅದೀ ಬಿನ್ ಅಲ್-ಖಿಯಾರ್ ರಿಂದ ವರದಿ: ಅವರು ಹೇಳಿದರು:
"ಇಬ್ಬರು ವ್ಯಕ್ತಿಗಳು ನನಗೆ ತಿಳಿಸಿದ್ದೇನೆಂದರೆ, ಅವರು ಹಜ್ಜತುಲ್ ವಿದಾಅ್ (ವಿದಾಯದ ಹಜ್ಜ್) ಸಂದರ್ಭದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಆಗ ಪ್ರವಾದಿಯವರು ಸದಕಾವನ್ನು (ದಾನವನ್ನು) ಹಂಚುತ್ತಿದ್ದರು. ಅವರು (ಆ ಇಬ್ಬರು) ಅದರಿಂದ ತಮಗೂ ನೀಡುವಂತೆ ಕೇಳಿದರು. ಆಗ ಅವರು (ಪ್ರವಾದಿ) ನಮ್ಮ ಕಡೆಗೆ ದೃಷ್ಟಿಯನ್ನು ಏರಿಸಿ ಮತ್ತು ತಗ್ಗಿಸಿ (ಪರಿಶೀಲಿಸಿ) ನೋಡಿದರು ಮತ್ತು ನಮ್ಮನ್ನು ದೃಢಕಾಯರು ಎಂದು ಕಂಡರು. ಆಗ ಅವರು ಹೇಳಿದರು: “ನೀವು ಇಚ್ಚಿಸುವುದಾದರೆ ನಾನು ನಿಮಗೆ ನೀಡುತ್ತೇನೆ. (ಆದರೆ) ಇದರಲ್ಲಿ ಶ್ರೀಮಂತನಿಗೆ ಅಥವಾ ದುಡಿಯಲು ಶಕ್ತನಾಗಿರುವ ಬಲಿಷ್ಠನಿಗೆ ಯಾವುದೇ ಪಾಲಿಲ್ಲ."

صحيح رواه أبو داود والنسائي سنن أبي داود - 1633

المعنى الإجمالي

ಹಜ್ಜತುಲ್ ವಿದಾಅ್ (ವಿದಾಯದ ಹಜ್) ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಆಗ ಅವರು ಸದಕಾವನ್ನು ಹಂಚುತ್ತಿದ್ದರು. ಆ ಇಬ್ಬರು ತಮಗೂ ಅದರಿಂದ ನೀಡಬೇಕೆಂದು ಕೇಳಿಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸ್ಥಿತಿಯನ್ನು ತಿಳಿಯಲು ಮತ್ತು ಅವರಿಗೆ ಸದಕಾ ಪಡೆಯುವುದು ಧರ್ಮಸಮ್ಮತವೇ (ಹಲಾಲ್) ಅಥವಾ ಅಲ್ಲವೇ ಎಂಬುದನ್ನು ತಿಳಿಯಲು ಅವರನ್ನು ಮತ್ತೆ ಮತ್ತೆ (ಮೇಲಿನಿಂದ ಕೆಳಗಿನವರೆಗೆ) ನೋಡಿದರು. ಅವರು ಅವರಿಬ್ಬರನ್ನೂ ಬಲಿಷ್ಠ ವ್ಯಕ್ತಿಗಳೆಂದು ಕಂಡುಕೊಂಡರು. ಆಗ ಅವರು ಹೇಳಿದರು: "ನೀವು ಬಯಸುವುದಾದರೆ ನಾನು ನಿಮಗೆ ಸದಕಾದಿಂದ ನೀಡುತ್ತೇನೆ. (ಆದರೆ) ಯಾರ ಬಳಿ ತನಗೆ ಸಾಕಾಗುವಷ್ಟು ಸಂಪತ್ತಿದೆಯೋ ಅವನಿಗೆ ಇದರಲ್ಲಿ ಪಾಲಿಲ್ಲ. ಮತ್ತು ದುಡಿದು ಸಂಪಾದಿಸಲು ಶಕ್ತನಾಗಿರುವವನಿಗೂ ಇದರಲ್ಲಿ ಪಾಲಿಲ್ಲ; ಅವನ ಬಳಿ ತಾನು ಶ್ರೀಮಂತನೆನಿಸುವಷ್ಟು ಸಂಪತ್ತು ಇಲ್ಲದಿದ್ದರೂ ಸರಿ."

من فوائد الحديث

  1. ಶ್ರೀಮಂತ ವ್ಯಕ್ತಿ ಅಥವಾ ದುಡಿದು ಸಂಪಾದಿಸುವ ಶಕ್ತಿಯುಳ್ಳ ಬಲಿಷ್ಠ ವ್ಯಕ್ತಿ (ಸದಕಾ) ಕೇಳುವುದು ನಿಷಿದ್ಧವಾಗಿದೆ.
  2. ಯಾರ ಬಳಿ ಸಂಪತ್ತಿದೆ ಎಂದು ತಿಳಿದಿಲ್ಲವೋ, ಅವರನ್ನು ಬಡವರು ಮತ್ತು ಸದಕಾ ಪಡೆಯಲು ಅರ್ಹರು ಎಂದು ಭಾವಿಸಲಾಗುತ್ತದೆ.
  3. ಕೇವಲ (ದೈಹಿಕ) ಶಕ್ತಿಯಿರುವುದು ಸದಕಾ ಪಡೆಯಲು ಅನರ್ಹ ಎಂದು ಸೂಚಿಸುವುದಿಲ್ಲ. ಬದಲಾಗಿ, ಅದರೊಂದಿಗೆ ದುಡಿಯುವ ಸಾಮರ್ಥ್ಯವೂ (ಕೆಲಸ ಸಿಗುವ ಸಾಧ್ಯತೆಯೂ) ಇರಬೇಕು.
  4. ತನಗೆ ಸಾಕಾಗುವಷ್ಟು ಸಂಪಾದಿಸಲು ಶಕ್ತನಾಗಿರುವವನು ಕಡ್ಡಾಯ ಸದಕಾವನ್ನು (ಝಕಾತ್) ಪಡೆಯುವುದು ಸಮ್ಮತಾರ್ಹವಲ್ಲ. ಏಕೆಂದರೆ ಶ್ರೀಮಂತನು ಸಂಪತ್ತಿನಿಂದ ಸ್ವಾವಲಂಬಿಯಾಗಿರುವಂತೆ, ಇವನು ದುಡಿಮೆಯ ಮೂಲಕ ಸ್ವಾವಲಂಬಿಯಾಗಿದ್ದಾನೆ.
  5. ಮುಸ್ಲಿಮ್ ವ್ಯಕ್ತಿತ್ವವನ್ನು ಸ್ವಾಭಿಮಾನದ ಮೇಲೆ ರೂಪಿಸುವ, ಮತ್ತು ಪಡೆಯುವುದಕ್ಕಿಂತ, ಕೇಳುವುದಕ್ಕಿಂತ ಹಾಗೂ ಸೋಮಾರಿತನಕ್ಕಿಂತ, ನೀಡುವುದರ ಮೇಲೆ (ದಾನ ಮಾಡುವುದರ ಮೇಲೆ) ರೂಪಿಸುವ ಪ್ರವಾದಿಯವರ ಶ್ರೇಷ್ಠ ಶಿಕ್ಷಣ ವಿಧಾನವಿದು.

عرض الترجمات

29 اللغة
EN English الإنجليزية
UR اردو الأوردية
ID Indonesia الإندونيسية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TH ไทย التايلندية
AS অসমীয়া الأسامية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
HU Magyar المجرية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية