1. الرئيسية
  2. التصنيفات
  3. ಫಿಕ್ಹ್ ಮತ್ತು ಉಸುಲ್-ಎ-ಫಿಖ್

حديث ಅವರು ತಮ್ಮ ಚಿಕ್ಕ ಮಗುವನ್ನು (ಗಂಡು ಮಗುವನ್ನು) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದರು. ಆ ಮಗು ಇನ್ನೂ (ಘನ) ಆಹಾರವನ್ನು ತಿನ್ನುತ್ತಿರಲಿಲ್ಲ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಅವನು ಅವರ ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿದನು. ಅವರು ನೀರನ್ನು ತರಿಸಿ, ಅದನ್ನು (ಮೂತ್ರದ ಮೇಲೆ) ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ

عَنْ أُمِّ قَيْسٍ بِنْتِ مِحْصَنٍ رَضيَ اللهُ عنها:
أَنَّهَا أَتَتْ بِابْنٍ لَهَا صَغِيرٍ لَمْ يَأْكُلِ الطَّعَامَ إِلَى رَسُولِ اللَّهِ صَلَّى اللهُ عَلَيْهِ وَسَلَّمَ، فَأَجْلَسَهُ رَسُولُ اللَّهِ صَلَّى اللهُ عَلَيْهِ وَسَلَّمَ فِي حَجْرِهِ، فَبَالَ عَلَى ثَوْبِهِ، فَدَعَا بِمَاءٍ، فَنَضَحَهُ وَلَمْ يَغْسِلْهُ.

ಉಮ್ಮ್ ಖೈಸ್ ಬಿಂತ್ ಮಿಹ್ಸನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಅವರು ತಮ್ಮ ಚಿಕ್ಕ ಮಗುವನ್ನು (ಗಂಡು ಮಗುವನ್ನು) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದರು. ಆ ಮಗು ಇನ್ನೂ (ಘನ) ಆಹಾರವನ್ನು ತಿನ್ನುತ್ತಿರಲಿಲ್ಲ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಅವನು ಅವರ ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿದನು. ಅವರು ನೀರನ್ನು ತರಿಸಿ, ಅದನ್ನು (ಮೂತ್ರದ ಮೇಲೆ) ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ.

صحيح متفق عليه صحيح البخاري - 223

المعنى الإجمالي

ಉಮ್ಮ್ ಖೈಸ್ ಬಿಂತ್ ಮಿಹ್ಸನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತಮ್ಮ ಮಗುವನ್ನು ಕರೆತಂದರು. ಅದು ವಯಸ್ಸಿನಲ್ಲಿ ಚಿಕ್ಕದಾಗಿದ್ದ ಕಾರಣ ಇನ್ನೂ ಆಹಾರ ತಿನ್ನಲು ಪ್ರಾರಂಭಿಸಿರಲಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಮಗು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿತು. ಪ್ರವಾದಿಯವರು ನೀರನ್ನು ತರಿಸಿ, ಅದನ್ನು ತಮ್ಮ ವಸ್ತ್ರದ ಮೇಲೆ ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ.

من فوائد الحديث

  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉನ್ನತ ನಡವಳಿಕೆ ಮತ್ತು ಅಪಾರ ವಿನಮ್ರತೆಯನ್ನು ತಿಳಿಸಲಾಗಿದೆ.
  2. ಜನರೊಂದಿಗೆ ಉತ್ತಮ ಒಡನಾಟ, ವಿನಮ್ರತೆಯಿಂದ ವರ್ತಿಸುವುದನ್ನು, ಮಕ್ಕಳೊಂದಿಗೆ ಮೃದುತ್ವ ತೋರುವುದನ್ನು, ಮತ್ತು ಹಿರಿಯರ ಮಕ್ಕಳನ್ನು ಗೌರವಿಸುವ ಮೂಲಕ ಹಾಗೂ ಅವರನ್ನು ಮಡಿಲಲ್ಲಿ ಕುಳ್ಳಿರಿಸಿಕೊಳ್ಳುವ ಮೂಲಕ ಹಿರಿಯರ ಮನಸ್ಸಿಗೆ ಸಂತೋಷ ನೀಡುವುದನ್ನು ಪ್ರೋತ್ಸಾಹಿಸಲಾಗಿದೆ.
  3. ಗಂಡು ಮಗುವಿನ ಮೂತ್ರವು ಅಶುದ್ಧವಾಗಿದೆ. ಅದು ಆಹಾರವನ್ನು ಸೇವಿಸದಿದ್ದರೂ ಸಹ.
  4. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾಡಿದ ಕಾರ್ಯವನ್ನು 'ನದ್ಹ್' (ಚಿಮುಕಿಸುವುದು) ಎಂದು ಕರೆಯಲಾಗುತ್ತದೆ. ಇದು ಆಹಾರ ತಿನ್ನಲು ಪ್ರಾರಂಭಿಸದ ಗಂಡು ಮಗುವಿಗೆ ಮಾತ್ರ ಸೀಮಿತವಾಗಿದೆ. ಹೆಣ್ಣು ಮಗುವಾದರೆ, ಅದು ಎಷ್ಟೇ ಚಿಕ್ಕದಾಗಿದ್ದರೂ ಅದರ ಮೂತ್ರವನ್ನು ತೊಳೆಯಲೇಬೇಕು.
  5. ತಾಯಿಯ ಹಾಲನ್ನು ಮಾತ್ರ ಕುಡಿಯುವ ಗಂಡು ಮಗುವಿನ ಮಲವನ್ನು ಇತರ ಅಶುದ್ಧಿಗಳಂತೆ ತೊಳೆಯಲೇಬೇಕು (ಇದಕ್ಕೆ ವಿನಾಯಿತಿ ಇಲ್ಲ).
  6. 'ತೊಳೆಯುವುದು' ಎಂದರೆ ಕೇವಲ ನೀರನ್ನು ತಲುಪಿಸುವುದಕ್ಕಿಂತ ಹೆಚ್ಚಾಗಿರಬೇಕು (ನೀರು ಹರಿಯುವಂತೆ ಮಾಡುವುದು ಅಥವಾ ಉಜ್ಜುವುದು).
  7. ಅಶುದ್ಧಿಯ ಸ್ಥಳವನ್ನು ಶುದ್ಧೀಕರಿಸಲು ತ್ವರೆ ಮಾಡುವುದು ಉತ್ತಮ. ಅಶುದ್ಧಿಯಿಂದ ಬೇಗನೆ ಶುದ್ಧರಾಗಲು ಮತ್ತು ಅದು ಮರೆತುಹೋಗದಿರಲು ಇದು ಸಹಕಾರಿಯಾಗಿದೆ.

عرض الترجمات

33 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
UG ئۇيغۇرچە الأيغورية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TH ไทย التايلندية
AS অসমীয়া الأسامية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
HU Magyar المجرية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية