1. الرئيسية
  2. التصنيفات
  3. ಸದ್ಗುಣಗಳು ಮತ್ತು ನಡವಳಿಕೆಗಳು

حديث ಗಾಳಿಯನ್ನು ನಿಂದಿಸಬೇಡಿ. ನಿಮಗೆ ಇಷ್ಟವಿಲ್ಲದ್ದನ್ನು ನೋಡಿದರೆ ಹೀಗೆ ಹೇಳಿರಿ: ಓ ಅಲ್ಲಾಹ್, ಈ ಗಾಳಿಯ ಒಳಿತು, ಅದರಲ್ಲಿರುವ ಒಳಿತು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಒಳಿತನ್ನು ನಾವು ನಿನ್ನಲ್ಲಿ ಬೇಡುತ್ತೇವೆ. ಈ ಗಾಳಿಯ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಕೆಡುಕಿನಿಂದ ನಾವು ನಿನ್ನಲ್ಲಿ ಅಭಯ ಯಾಚಿಸುತ್ತೇವೆ

عَنْ أُبَيِّ بْنِ كَعْبٍ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«لاَ تَسُبُّوا الرِّيحَ، فَإِذَا رَأَيْتُمْ مَا تَكْرَهُونَ فَقُولُوا: اللَّهُمَّ إِنَّا نَسْأَلُكَ مِنْ خَيْرِ هَذِهِ الرِّيحِ وَخَيْرِ مَا فِيهَا وَخَيْرِ مَا أُمِرَتْ بِهِ، وَنَعُوذُ بِكَ مِنْ شَرِّ هَذِهِ الرِّيحِ وَشَرِّ مَا فِيهَا وَشَرِّ مَا أُمِرَتْ بِهِ».

ಉಬೈ ಬಿನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:
"ಗಾಳಿಯನ್ನು ನಿಂದಿಸಬೇಡಿ. ನಿಮಗೆ ಇಷ್ಟವಿಲ್ಲದ್ದನ್ನು ನೋಡಿದರೆ ಹೀಗೆ ಹೇಳಿರಿ: ಓ ಅಲ್ಲಾಹ್, ಈ ಗಾಳಿಯ ಒಳಿತು, ಅದರಲ್ಲಿರುವ ಒಳಿತು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಒಳಿತನ್ನು ನಾವು ನಿನ್ನಲ್ಲಿ ಬೇಡುತ್ತೇವೆ. ಈ ಗಾಳಿಯ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಕೆಡುಕಿನಿಂದ ನಾವು ನಿನ್ನಲ್ಲಿ ಅಭಯ ಯಾಚಿಸುತ್ತೇವೆ."

صحيح رواه الترمذي سنن الترمذي - 2252

المعنى الإجمالي

ಗಾಳಿಯನ್ನು ಶಪಿಸುವುದು ಅಥವಾ ನಿಂದಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಏಕೆಂದರೆ ಅದು ತನ್ನ ಸೃಷ್ಟಿಕರ್ತನ ಆಜ್ಞೆಯಂತೆ ವರ್ತಿಸುತ್ತದೆ. ಅದು ಕೆಲವೊಮ್ಮೆ ಕರುಣೆಯನ್ನು ಮತ್ತು ಕೆಲವೊಮ್ಮೆ ಶಿಕ್ಷೆಯನ್ನು ತರುತ್ತದೆ. ಅದನ್ನು ನಿಂದಿಸುವುದು ಅದರ ಸೃಷ್ಟಿಕರ್ತನಾದ ಅಲ್ಲಾಹನನ್ನು ನಿಂದಿಸಿದಂತೆ ಮತ್ತು ಅವನ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದಂತೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಸೃಷ್ಟಿಕರ್ತನಾದ ಅಲ್ಲಾಹನ ಕಡೆಗೆ ಮರಳಲು ಮತ್ತು ಅದರ ಒಳಿತು, ಅದರಲ್ಲಿರುವ ಒಳಿತು ಹಾಗೂ ಮಳೆಯನ್ನು ತರುವುದು, ಪರಾಗಸ್ಪರ್ಶವನ್ನು ಸಾಗಿಸುವುದು ಮುಂತಾದವುಗಳಿಗಾಗಿ ಅದನ್ನು ಕಳುಹಿಸಲಾದ ಒಳಿತನ್ನು ಬೇಡಲು ನಿರ್ದೇಶಿಸುತ್ತಾರೆ. ಹಾಗೆಯೇ ಅದರ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಸಸ್ಯಗಳು ಹಾಗೂ ಮರಗಳನ್ನು ನಾಶಪಡಿಸುವುದು, ಜಾನುವಾರುಗಳನ್ನು ನಾಶಪಡಿಸುವುದು ಮತ್ತು ಕಟ್ಟಡಗಳನ್ನು ಕೆಡುವುದು ಮುಂತಾದವುಗಳಿಗಾಗಿ ಅದನ್ನು ಕಳುಹಿಸಲಾದ ಕೆಡುಕಿನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಲು ನಿರ್ದೇಶಿಸುತ್ತಾರೆ. ಅಲ್ಲಾಹನಲ್ಲಿ ಈ ರೀತಿ ಬೇಡುವುದು ಅಲ್ಲಾಹನಿಗಿರುವ ದಾಸ್ಯತ್ವವನ್ನು ನಿಜಪಡಿಸುವುದಾಗಿದೆ.

من فوائد الحديث

  1. ಗಾಳಿಯನ್ನು ನಿಂದಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ನಿಯಂತ್ರಣದಲ್ಲಿರುವ ಸೃಷ್ಟಿಯಾಗಿದೆ. ಆದ್ದರಿಂದ, ಅದನ್ನು ನಿಂದಿಸಿದರೆ ಅದರ ಸೃಷ್ಟಿಕರ್ತ ಮತ್ತು ನಿಯಂತ್ರಕನನ್ನು ನಿಂದಿಸಿದಂತಾಗುತ್ತದೆ. ಅದು ತೌಹೀದ್‌ನಲ್ಲಿರುವ (ಏಕದೇವವಿಶ್ವಾಸದಲ್ಲಿರುವ) ಕೊರತೆಯಾಗಿದೆ.
  2. ಅಲ್ಲಾಹನ ಕಡೆಗೆ ಮರಳುವುದು ಮತ್ತು ಅವನು ಸೃಷ್ಟಿಸಿದ ಕೆಡುಕಿನಿಂದ ಅವನಲ್ಲಿ ಆಶ್ರಯ ಪಡೆಯುವುದು.
  3. ಗಾಳಿಯನ್ನು ಒಳಿತಿನ ಆದೇಶದೊಂದಿಗೆ ಕಳುಹಿಸಲಾಗುತ್ತದೆ. ಹಾಗೆಯೇ ಅದನ್ನು ಕೆಡುಕಿನ ಆದೇಶದೊಂದಿಗೂ ಕಳುಹಿಸಲಾಗುತ್ತದೆ.
  4. ಇಬ್ನ್ ಬಾಝ್ ಹೇಳುತ್ತಾರೆ: "ಗಾಳಿಯನ್ನು ನಿಂದಿಸುವುದು ಪಾಪಗಳಲ್ಲಿ ಒಂದಾಗಿದೆ. ಏಕೆಂದರೆ ಅದು ನಿಯಂತ್ರಣದಲ್ಲಿರುವ ಸೃಷ್ಟಿಯಾಗಿದೆ. ಅದನ್ನು ಒಳಿತಿನೊಂದಿಗೂ ಕೆಡುಕಿನೊಂದಿಗೂ ಕಳುಹಿಸಲಾಗುತ್ತದೆ. ಆದ್ದರಿಂದ ಅದನ್ನು ನಿಂದಿಸುವುದು ಸರಿಯಲ್ಲ. "ಅಲ್ಲಾಹು ಗಾಳಿಯನ್ನು ಶಪಿಸಲಿ" ಅಥವಾ "ಅಲ್ಲಾಹು ಗಾಳಿಯೊಂದಿಗೆ ಹೋರಾಡಲಿ" ಅಥವಾ "ಈ ಗಾಳಿಯಲ್ಲಿ ಅಲ್ಲಾಹು ಸಮೃದ್ಧಿ (ಬರಕತ್) ಮಾಡದಿರಲಿ" ಮುಂತಾದ ಮಾತುಗಳನ್ನು ಹೇಳಬಾರದು. ಬದಲಿಗೆ, ಸತ್ಯವಿಶ್ವಾಸಿಯು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾರ್ಗದರ್ಶನದಂತೆ ನಡೆಯಬೇಕು."
  5. ನಿಂದಿಸುವುದು ಮತ್ತು ಶಪಿಸುವುದರಲ್ಲಿ ಗಾಳಿಯಂತೆಯೇ ಅದರೊಂದಿಗೆ ಸಂಬಂಧವಿರುವ ತಾಪ, ಚಳಿ, ಬಿಸಿಲು, ಧೂಳು ಮುಂತಾದ ಅಲ್ಲಾಹನ ಸೃಷ್ಟಿ ಮತ್ತು ನಿಯಂತ್ರಣದಲ್ಲಿರುವ ಇತರ ವಿಷಯಗಳೂ ಸೇರುತ್ತವೆ.

عرض الترجمات

47 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
UG ئۇيغۇرچە الأيغورية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TA தமிழ் التاميلية
MY မြန်မာ البورمية
TH ไทย التايلندية
DE Deutsch الألمانية
PS پښتو بشتو
AS অসমীয়া الأسامية
SQ Shqip الألبانية
SV Svenska السويدية
AM አማርኛ الأمهرية
NL Nederlands الهولندية
GU ગુજરાતી الغوجاراتية
NE नेपाली النيبالية
YO Yorùbá اليوروبا
PRS دری الدرية
SR Српски الصربية
RO Română الرومانية
HU Magyar المجرية
MOS Moore الموري
MG Malagasy المالاجاشية
WO Wolof الولوف
UK Українська الأوكرانية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية