1. الرئيسية
  2. التصنيفات
  3. ಸದ್ಗುಣಗಳು ಮತ್ತು ನಡವಳಿಕೆಗಳು

حديث ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿಂದನೀಯ ಸ್ವಭಾವದಿಂದ, (ಕೆಟ್ಟ) ಕಾರ್ಯಗಳಿಂದ ಮತ್ತು (ಕೆಟ್ಟ) ಇಚ್ಛೆಗಳಿಂದ ನಿನ್ನಲ್ಲಿ ಅಭಯ ಕೋರುತ್ತೇನೆ.)

عَن قُطْبَةَ بنِ مَالِكٍ رَضيَ اللهُ عنه قَالَ: كَانَ النَّبِيُّ صَلَّى اللَّهُ عَلَيْهِ وَسَلَّمَ يَقُولُ:
«اللَّهُمَّ إِنِّي أَعُوذُ بِكَ مِنْ مُنْكَرَاتِ الأَخْلاَقِ وَالأَعْمَالِ وَالأَهْوَاءِ».

ಖುತ್ಬಾ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು:
"ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿಂದನೀಯ ಸ್ವಭಾವದಿಂದ, (ಕೆಟ್ಟ) ಕಾರ್ಯಗಳಿಂದ ಮತ್ತು (ಕೆಟ್ಟ) ಇಚ್ಛೆಗಳಿಂದ ನಿನ್ನಲ್ಲಿ ಅಭಯ ಕೋರುತ್ತೇನೆ.)

صحيح رواه الترمذي سنن الترمذي - 3591

المعنى الإجمالي

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥನೆಗಳಲ್ಲಿ ಇದೂ ಒಂದಾಗಿತ್ತು: "ಅಲ್ಲಾಹುಮ್ಮ ಇನ್ನೀ ಅಊದು" ಓ ಅಲ್ಲಾಹನೇ, ನಾನು ಅಭಯ ಕೋರುತ್ತೇನೆ, ಮೊರೆ ಹೋಗುತ್ತೇನೆ ಮತ್ತು ರಕ್ಷಣೆ ಬೇಡುತ್ತೇನೆ "ಬಿಕ" ನಿನ್ನಲ್ಲಿ, ನಿನ್ನನ್ನು ಹೊರತುಪಡಿಸಿ ಬೇರೆ ಯಾರಲ್ಲೂ ಅಲ್ಲ, "ಮಿನ್ ಮುನ್ಕರಾತಿ" ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ ವಿಷಯಗಳಿಂದ, "ಅಲ್-ಅಖ್ಲಾಖ್" ದ್ವೇಷ/ಹಗೆತನ, ಅಸೂಯೆ, ಅಹಂಕಾರ ಮುಂತಾದ ಸ್ವಭಾವಗಳಿಂದ, "ವ" ಮತ್ತು ನಿಂದನೀಯ "ಅಲ್-ಅಅ್‌ಮಾಲ್" ಅಂದರೆ, ಬೈಯ್ಯುವುದು, ನಿಂದಿಸುವುದು ಮುಂತಾದ ಕಾರ್ಯಗಳಿಂದ, "ವ" ಮತ್ತು ಎಲ್ಲಾ "ಅಲ್-ಅಹ್ವಾಅ್" ಇಚ್ಛೆಗಳಿಂದ, ಅಂದರೆ, ಮನಸ್ಸು ಬಯಸುವ ಮತ್ತು ಶರೀಅತ್‌ಗೆ ವಿರುದ್ಧವಾಗಿರುವ ಇಚ್ಛೆಗಳಿಂದ (ಅಭಯ ಕೋರುತ್ತೇನೆ).

من فوائد الحديث

  1. ಈ ಪ್ರಾರ್ಥನೆಯ ಶ್ರೇಷ್ಠತೆಯನ್ನು ಮತ್ತು ಅದನ್ನು (ಹೇಳುವುದು) ಅಪೇಕ್ಷಣೀಯವಾಗಿದೆ ಎಂದು ತಿಳಿಸಲಾಗಿದೆ.
  2. ಸತ್ಯವಿಶ್ವಾಸಿಯು ನಿಂದನೀಯ ಸ್ವಭಾವ ಮತ್ತು ಕೆಟ್ಟ ಕಾರ್ಯಗಳಿಂದ ದೂರವಿರಲು ಆಸಕ್ತಿ ವಹಿಸಬೇಕು, ಮತ್ತು ಮನದ ಇಚ್ಛೆಯನ್ನು ಅನುಸರಿಸುವುದು ಹಾಗೂ ಶಾರೀರಿಕ ಆಸೆಗಳಿಗೆ (ಶಹವಾತ್) ಬಲಿಯಾಗುವುದರ ಬಗ್ಗೆ ಎಚ್ಚರದಿಂದಿರಬೇಕು.
  3. ಸ್ವಭಾವ, ಕರ್ಮ ಮತ್ತು ಇಚ್ಛೆಗಳನ್ನು 'ಮುನ್ಕರ್' (ಕೆಟ್ಟದ್ದು) ಮತ್ತು 'ಮಅ್‌ರೂಫ್' (ಒಳ್ಳೆಯದು) ಎಂದು ವಿಂಗಡಿಸಲಾಗಿದೆ.

عرض الترجمات

36 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
MY မြန်မာ البورمية
TH ไทย التايلندية
PS پښتو بشتو
AS অসমীয়া الأسامية
AM አማርኛ الأمهرية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
RO Română الرومانية
HU Magyar المجرية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية