1. الرئيسية
  2. التصنيفات
  3. ಅಕೀದಾ

حديث 'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)'

عَن أَبِي هُرَيْرَةَ رَضيَ اللهُ عنهُ عَنْ رَسُولِ اللهِ صَلَّى اللهُ عَلَيْهِ وَسَلَّمَ قَالَ:
«إِنَّ أَدْنَى مَقْعَدِ أَحَدِكُمْ مِنَ الْجَنَّةِ أَنْ يَقُولَ لَهُ: تَمَنَّ فَيَتَمَنَّى، وَيَتَمَنَّى، فَيَقُولُ لَهُ: هَلْ تَمَنَّيْتَ؟ فَيَقُولُ: نَعَمْ، فَيَقُولُ لَهُ: فَإِنَّ لَكَ مَا تَمَنَّيْتَ وَمِثْلَهُ مَعَهُ».

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನ ಅತ್ಯಂತ ಕೆಳಮಟ್ಟದ ಸ್ಥಾನವು (ಹೇಗಿರುತ್ತದೆ) ಎಂದರೆ, ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಏನಾದರೂ ಇಚ್ಚಿಸು!'. ಆಗ ಅವನು ಇಚ್ಚಿಸುತ್ತಾನೆ, ಮತ್ತು ಇಚ್ಚಿಸುತ್ತಾನೆ (ಇಚ್ಚಿಸುತ್ತಲೇ ಇರುತ್ತಾನೆ). ನಂತರ ಅವನೊಂದಿಗೆ (ಅಲ್ಲಾಹು) ಕೇಳುತ್ತಾನೆ: 'ನೀನು (ಎಲ್ಲವನ್ನೂ) ಇಚ್ಚಿಸಿದೆಯಾ?'. ಅವನು ಹೇಳುತ್ತಾನೆ: 'ಹೌದು'. ಆಗ ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)' ".

صحيح رواه مسلم صحيح مسلم - 182

المعنى الإجمالي

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸ್ವರ್ಗವನ್ನು ಪ್ರವೇಶಿಸುವವರಲ್ಲಿ ಅತ್ಯಂತ ಕೆಳಮಟ್ಟದ ಮತ್ತು ಕನಿಷ್ಠ ದರ್ಜೆಯ ವ್ಯಕ್ತಿಯೊಂದಿಗೆ (ಅಲ್ಲಾಹು) ಹೇಳುತ್ತಾನೆ: ಇಚ್ಚಿಸು. ಆಗ ಅವನು ಇಚ್ಚಿಸುತ್ತಾನೆ, ಮತ್ತು ಬಯಸುತ್ತಾನೆ, ಎಲ್ಲಿಯವರೆಗೆಂದರೆ ಅವನು ಪ್ರಕಟಿಸದಂತಹ ಯಾವುದೇ ಬಯಕೆಯೂ ಉಳಿಯುವುದಿಲ್ಲ. ನಂತರ ಅವನೊಂದಿಗೆ (ಅಲ್ಲಾಹು) ಕೇಳುತ್ತಾನೆ: ನೀನು (ಎಲ್ಲವನ್ನೂ) ಬಯಸಿದೆಯಾ? ಅವನು ಹೇಳುತ್ತಾನೆ: ಹೌದು. ಆಗ ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ).

من فوائد الحديث

  1. ಸ್ವರ್ಗವಾಸಿಗಳ ಸ್ಥಾನಮಾನಗಳಲ್ಲಿ (ದರ್ಜೆಗಳಲ್ಲಿ) ವ್ಯತ್ಯಾಸವಿರುತ್ತದೆ.
  2. ಅಲ್ಲಾಹುವಿನ ಮಹಾನ್ ಔದಾರ್ಯವನ್ನು ವಿವರಿಸಲಾಗಿದೆ.
  3. ಸ್ವರ್ಗದ ಅನುಗ್ರಹಗಳು ಯಾವುದೇ ನಿರ್ದಿಷ್ಟ ವಸ್ತುವಿಗೆ ಸೀಮಿತವಾಗಿಲ್ಲ. ಬದಲಿಗೆ ಸತ್ಯವಿಶ್ವಾಸಿಯು ತಾನು ಬಯಸುವ ಮತ್ತು ತನ್ನ ಮನಸ್ಸು ಆಶಿಸುವ ಎಲ್ಲವನ್ನೂ ಅಲ್ಲಾಹುವಿನ ಕಡೆಯಿಂದ ಅನುಗ್ರಹ, ಔದಾರ್ಯ ಮತ್ತು ಕೃಪೆಯ ರೂಪದಲ್ಲಿ ಅಲ್ಲಿ ಕಂಡುಕೊಳ್ಳುತ್ತಾನೆ.

عرض الترجمات

43 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TA தமிழ் التاميلية
MY မြန်မာ البورمية
TH ไทย التايلندية
PS پښتو بشتو
AS অসমীয়া الأسامية
SQ Shqip الألبانية
SV Svenska السويدية
AM አማርኛ الأمهرية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
RO Română الرومانية
HU Magyar المجرية
MOS Moore الموري
MG Malagasy المالاجاشية
WO Wolof الولوف
UK Українська الأوكرانية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية