1. الرئيسية
  2. التصنيفات
  3. ಸದ್ಗುಣಗಳು ಮತ್ತು ನಡವಳಿಕೆಗಳು

حديث ಯಾವುದೇ ಗುಂಪು ಜನರು ಒಂದು ಸಭೆಯಿಂದ ಎದ್ದು ಹೋಗುವಾಗ, ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ಕತ್ತೆಯ ಹೆಣದಂತಿರುವ (ಸ್ಥಳದಿಂದ) ಎದ್ದು ಹೋದಂತೆ ಆಗುತ್ತದೆ, ಮತ್ತು ಅದು ಅವರಿಗೆ ವಿಷಾದಕ್ಕೆ ಕಾರಣವಾಗುತ್ತದೆ

عَنْ أَبِي هُرَيْرَةَ رضي الله عنه قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«مَا مِنْ قَوْمٍ يَقُومُونَ مِنْ مَجْلِسٍ لَا يَذْكُرُونَ اللَّهَ فِيهِ إِلَّا قَامُوا عَنْ مِثْلِ جِيفَةِ حِمَارٍ، وَكَانَ لَهُمْ حَسْرَةً».

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಗುಂಪು ಜನರು ಒಂದು ಸಭೆಯಿಂದ ಎದ್ದು ಹೋಗುವಾಗ, ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ಕತ್ತೆಯ ಹೆಣದಂತಿರುವ (ಸ್ಥಳದಿಂದ) ಎದ್ದು ಹೋದಂತೆ ಆಗುತ್ತದೆ, ಮತ್ತು ಅದು ಅವರಿಗೆ ವಿಷಾದಕ್ಕೆ ಕಾರಣವಾಗುತ್ತದೆ."

صحيح رواه أبو داود سنن أبي داود - 4855

المعنى الإجمالي

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾವುದೇ ಗುಂಪು ಜನರು ಒಂದು ಸಭೆಯಲ್ಲಿ ಕುಳಿತು, ನಂತರ ಅದರಿಂದ ಎದ್ದು ಹೋಗುವಾಗ ಅದರಲ್ಲಿ ಅಲ್ಲಾಹನನ್ನು ಸ್ಮರಿಸದಿದ್ದರೆ, ಅವರು ದುರ್ನಾತ ಬೀರುವ ಮತ್ತು ಹೊಲಸಾದ ಕತ್ತೆಯ ಹೆಣದ ಸುತ್ತ ಸೇರಿಕೊಂಡು ಅಲ್ಲಿಂದ ಎದ್ದು ಹೋದಂತೆ ಆಗುತ್ತದೆ. ಏಕೆಂದರೆ ಅವರು ಅಲ್ಲಾಹನ ಸ್ಮರಣೆಯನ್ನು ಬಿಟ್ಟು ಬೇರೆ ಮಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಭೆಯು ಅವರಿಗೆ ಪುನರುತ್ಥಾನ ದಿನದಂದು ವಿಷಾದ, ನಷ್ಟ ಮತ್ತು ಶಾಶ್ವತ ದುಃಖಕ್ಕೆ ಕಾರಣವಾಗುತ್ತದೆ.

من فوائد الحديث

  1. ಅಲ್ಲಾಹನ ಸ್ಮರಣೆಯಿಂದ ಅಲಕ್ಷ್ಯರಾಗುವುದರ ಬಗ್ಗೆ ಎಚ್ಚರಿಕೆ ನೀಡಿರುವುದು ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇತರ ಸಂದರ್ಭಗಳಿಗೂ ಅನ್ವಯಿಸುತ್ತದೆ. ನವವಿ ಹೇಳಿದರು: "ಯಾವುದೇ ಸ್ಥಳದಲ್ಲಿ ಕುಳಿತಿರುವವರು ಅಲ್ಲಾಹನನ್ನು ಸ್ಮರಿಸುವ ಮೊದಲು ಅದನ್ನು ಬಿಟ್ಟು ಹೋಗುವುದು ಮಕ್ರೂಹ್ (ಅನಪೇಕ್ಷಿತ) ಆಗಿದೆ."
  2. ಪುನರುತ್ಥಾನ ದಿನದಂದು ಅವರಿಗೆ ಉಂಟಾಗುವ ವಿಷಾದವೇನೆಂದರೆ: ಸಮಯವನ್ನು ಅಲ್ಲಾಹನ ಅನುಸರಣೆಯಲ್ಲಿ ಸದುಪಯೋಗಪಡಿಸಿಕೊಳ್ಳದ ಕಾರಣ ಅವರಿಗೆ ಪ್ರತಿಫಲ ಮತ್ತು ಪುಣ್ಯಗಳು ನಷ್ಟವಾಗಬಹುದು. ಅಥವಾ ಅಲ್ಲಾಹನಿಗೆ ಅವಿಧೇಯತೆ ತೋರುವ ವಿಧದಲ್ಲಿ ಸಮಯವನ್ನು ಕಳೆದುದರಿಂದ ಅವರಿಗೆ ಪಾಪ ಮತ್ತು ಶಿಕ್ಷೆಯಾಗಬಹುದು.
  3. ಈ ಎಚ್ಚರಿಕೆಯಿರುವುದು ಅನುಮತಿಸಲಾದ ವಿಷಯಗಳಲ್ಲಿ ಅಲಕ್ಷ್ಯತೆ ತೋರುವುದಕ್ಕಾಗಿದೆ. ಹೀಗಿರುವಾಗ, ಪರದೂಷಣೆ, ಚಾಡಿ ಮುಂತಾದವುಗಳಿರುವ ನಿಷಿದ್ಧ ಸಭೆಗಳ ಸ್ಥಿತಿ ಏನಾಗಿರಬಹುದು?

عرض الترجمات

51 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
UG ئۇيغۇرچە الأيغورية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TA தமிழ் التاميلية
MY မြန်မာ البورمية
TH ไทย التايلندية
DE Deutsch الألمانية
PS پښتو بشتو
AS অসমীয়া الأسامية
SQ Shqip الألبانية
SV Svenska السويدية
AM አማርኛ الأمهرية
NL Nederlands الهولندية
GU ગુજરાતી الغوجاراتية
NE नेपाली النيبالية
YO Yorùbá اليوروبا
LT Lietuvių الليتوانية
PRS دری الدرية
SR Српски الصربية
TG тоҷикӣ الطاجيكية
RW Kinyarwanda الكينياروندا
RO Română الرومانية
HU Magyar المجرية
MOS Moore الموري
MG Malagasy المالاجاشية
OM Oromoo الأورومو
WO Wolof الولوف
UK Українська الأوكرانية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية