عَنْ أَبِي العَبَّاسِ، عَبْدِ الله بْنِ عَبَّاسٍ رَضِيَ اللَّهُ عَنْهُمَا قَالَ: كُنْت خَلْفَ رَسُولِ اللَّهِ صَلَّى اللهُ عَلَيْهِ وَسَلَّمَ يَوْمًا، فَقَالَ:
«يَا غُلَامِ! إنِّي أُعَلِّمُك كَلِمَاتٍ: احْفَظِ اللَّهَ يَحْفَظْكَ، احْفَظِ الله تَجِدْهُ تُجَاهَكَ، إذَا سَأَلْتَ فَاسْأَلِ اللهَ، وَإِذَا اسْتَعَنْتَ فَاسْتَعِنْ بِاَللهِ، وَاعْلَمْ أَنَّ الأُمَّةَ لَوْ اجْتَمَعَتْ عَلَى أَنْ يَنْفَعُوكَ بِشَيْءٍ لَمْ يَنْفَعُوكَ إلَّا بِشَيْءٍ قَدْ كَتَبَهُ اللَّهُ لَكَ، وَإِنِ اجْتَمَعُوا عَلَى أَنْ يَضُرُّوكَ بِشَيْءٍ لَمْ يَضُرُّوكَ إلَّا بِشَيْءٍ قَدْ كَتَبَهُ اللَّهُ عَلَيْكَ؛ رُفِعَتِ الأَقْلَامُ، وَجَفَّتِ الصُّحُفُ».
وَفِي رِوَايَةِ غَيْرِ التِّرْمِذِيِّ: «احْفَظِ اللهَ تَجِدْهُ أَمَامَكَ، تَعَرَّفْ إلَى اللهِ فِي الرَّخَاءِ يَعْرِفْكَ فِي الشِّدَّةِ، وَاعْلَمْ أَنَّ مَا أَخْطَأَكَ لَمْ يَكُنْ لِيُصِيبَكَ، وَمَا أَصَابَك لَمْ يَكُنْ لِيُخْطِئَكَ، وَاعْلَمْ أَنَّ النَّصْرَ مَعَ الصَّبْرِ، وَأَنْ الفَرَجَ مَعَ الكَرْبِ، وَأَنَّ مَعَ العُسْرِ يُسْرًا».
المزيد
ಅಬುಲ್-ಅಬ್ಬಾಸ್, ಅಬ್ದುಲ್ಲಾ ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ (ವಾಹನದಲ್ಲಿ) ಇದ್ದೆನು. ಆಗ ಅವರು ಹೇಳಿದರು:
"ಓ ಬಾಲಕನೇ! ನಾನು ನಿನಗೆ ಕೆಲವು ಮಾತುಗಳನ್ನು ಕಲಿಸುತ್ತೇನೆ: ನೀನು ಅಲ್ಲಾಹನನ್ನು (ಅವನ ಆಜ್ಞೆಗಳನ್ನು) ರಕ್ಷಿಸು, ಅವನು ನಿನ್ನನ್ನು ರಕ್ಷಿಸುತ್ತಾನೆ. ನೀನು ಅಲ್ಲಾಹನನ್ನು ರಕ್ಷಿಸು, ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣುವೆ. ನೀನು ಕೇಳುವುದಾದರೆ, ಅಲ್ಲಾಹನಲ್ಲಿಯೇ ಕೇಳು, ಮತ್ತು ನೀನು ಸಹಾಯವನ್ನು ಕೋರುವುದಾದರೆ, ಅಲ್ಲಾಹನಲ್ಲಿಯೇ ಸಹಾಯವನ್ನು ಕೋರು. ತಿಳಿದುಕೋ, ಒಂದು ವೇಳೆ ಇಡೀ ಸಮುದಾಯವು ನಿನಗೆ ಯಾವುದಾದರೂ ವಿಷಯದಲ್ಲಿ ಪ್ರಯೋಜನ ನೀಡಲು ಒಟ್ಟುಗೂಡಿದರೂ, ಅಲ್ಲಾಹು ನಿನಗಾಗಿ ಬರೆದಿಟ್ಟದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಯೋಜನವನ್ನು ಅವರು ನಿನಗೆ ನೀಡಲಾರರು. ಮತ್ತು ಒಂದು ವೇಳೆ ಅವರು ನಿನಗೆ ಯಾವುದಾದರೂ ವಿಷಯದಲ್ಲಿ ಹಾನಿ ಮಾಡಲು ಒಟ್ಟುಗೂಡಿದರೂ, ಅಲ್ಲಾಹು ನಿನ್ನ ಮೇಲೆ ಬರೆದಿಟ್ಟದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಹಾನಿಯನ್ನು ಅವರು ನಿನಗೆ ಮಾಡಲಾರರು; ಲೇಖನಿಗಳನ್ನು ಎತ್ತಲಾಗಿದೆ, ಮತ್ತು ಪುಟಗಳು ಒಣಗಿಹೋಗಿವೆ". ತಿರ್ಮಿದಿಯಲ್ಲದ ಇತರರ ವರದಿಯಲ್ಲಿ (ಹೆಚ್ಚುವರಿಯಾಗಿ) ಹೀಗಿದೆ: "ನೀನು ಅಲ್ಲಾಹನನ್ನು ರಕ್ಷಿಸು, ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣುವೆ. ನೀನು ಸುಖ-ಸಮೃದ್ಧಿಯ ಸಮಯದಲ್ಲಿ ಅಲ್ಲಾಹನನ್ನು ಅರಿತುಕೋ, ಅವನು ನಿನ್ನನ್ನು ಕಷ್ಟದ ಸಮಯದಲ್ಲಿ ಅರಿತುಕೊಳ್ಳುತ್ತಾನೆ. ತಿಳಿದುಕೋ, ಯಾವುದು ನಿನಗೆ ತಪ್ಪಿಹೋಗಿದೆಯೋ, ಅದು ನಿನಗೆ ತಗಲುವಂಥದ್ದಾಗಿರಲಿಲ್ಲ, ಮತ್ತು ಯಾವುದು ನಿನಗೆ ತಗಲಿದೆಯೋ, ಅದು ನಿನ್ನಿಂದ ತಪ್ಪಿಹೋಗುವಂಥದ್ದಾಗಿರಲಿಲ್ಲ. ತಿಳಿದುಕೋ, ತಾಳ್ಮೆಯೊಂದಿಗೆ ವಿಜಯವಿದೆ, ಸಂಕಷ್ಟದೊಂದಿಗೆ ಪರಿಹಾರವಿದೆ, ಮತ್ತು ಕಷ್ಟದೊಂದಿಗೆ ಸುಲಭವಿದೆ".