1. الرئيسية
  2. التصنيفات
  3. ಫಿಕ್ಹ್ ಮತ್ತು ಉಸುಲ್-ಎ-ಫಿಖ್

حديث ನಿನ್ನ ಸಹೋದರನಿಗೆ ಸಹಾಯ ಮಾಡು, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ ಸಹ

عَنْ أَنَسِ بْنِ مَالِكٍ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«انْصُرْ أَخَاكَ ظَالِمًا أَوْ مَظْلُومًا». فَقَالَ رَجُلٌ: يَا رَسُولَ اللَّهِ، أَنْصُرُهُ إِذَا كَانَ مَظْلُومًا، أَفَرَأَيْتَ إِذَا كَانَ ظَالِمًا كَيْفَ أَنْصُرُهُ؟ قَالَ: « تَحْجُزُهُ -أَوْ تَمْنَعُهُ- مِنَ الظُّلْمِ؛ فَإِنَّ ذَلِكَ نَصْرُهُ».

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿನ್ನ ಸಹೋದರನಿಗೆ ಸಹಾಯ ಮಾಡು, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ ಸಹ". ಆಗ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅವನು ಅನ್ಯಾಯಕ್ಕೊಳಗಾದವನಾಗಿದ್ದರೆ ನಾನು ಅವನಿಗೆ ಸಹಾಯ ಮಾಡುತ್ತೇನೆ. ಆದರೆ, ಅವನು ಅನ್ಯಾಯ ಮಾಡುವವನಾಗಿದ್ದರೆ ನಾನು ಅವನಿಗೆ ಹೇಗೆ ಸಹಾಯ ಮಾಡಲಿ ಎಂದು ತಿಳಿಸಿರಿ?" ಅವರು (ಪ್ರವಾದಿ) ಹೇಳಿದರು: "ನೀನು ಅವನನ್ನು ಅನ್ಯಾಯದಿಂದ ತಡೆಯುವುದು, ಖಂಡಿತವಾಗಿಯೂ, ಅದೇ ಅವನಿಗೆ ಮಾಡುವ ಸಹಾಯವಾಗಿದೆ".

صحيح رواه البخاري صحيح البخاري - 6952

المعنى الإجمالي

ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಾದ ಮುಸ್ಲಿಮನಿಗೆ, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ, ಸಹಾಯ ಮಾಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದರು. ಆಗ ಒಬ್ಬ ವ್ಯಕ್ತಿ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಅವನು ಅನ್ಯಾಯಕ್ಕೊಳಗಾದವನಾಗಿದ್ದರೆ, ಅವನ ಮೇಲಿನ ಅನ್ಯಾಯವನ್ನು ದೂರ ಮಾಡುವ ಮೂಲಕ ನಾನು ಅವನಿಗೆ ಸಹಾಯ ಮಾಡುತ್ತೇನೆ. ಆದರೆ, ಅವನು ಅನ್ಯಾಯ ಮಾಡುವವನಾಗಿದ್ದರೆ ನಾನು ಅವನಿಗೆ ಸಹಾಯ ಮಾಡುವುದು ಹೇಗೆ ಎಂದು ತಿಳಿಸಿರಿ? ಅವರು (ಪ್ರವಾದಿ) ಹೇಳಿದರು: ನೀನು ಅವನನ್ನು ತಡೆಯುವುದು, ಅವನ ಕೈಗಳನ್ನು ಹಿಡಿಯುವುದು, ಅವನನ್ನು ತಡೆಗಟ್ಟುವುದು ಮತ್ತು ಅನ್ಯಾಯದಿಂದ ಅವನನ್ನು ದೂರವಿರಿಸುವುದು. ಖಂಡಿತವಾಗಿಯೂ, ಇದು ಅವನ ಪೈಶಾಚಿಕತೆ ಮತ್ತು ಕೆಡುಕನ್ನು ಪ್ರೇರೇಪಿಸುವ ಅವನ ಆತ್ಮದ ವಿರುದ್ಧ ಅವನಿಗೆ ಮಾಡುವ ಸಹಾಯವಾಗಿದೆ.

من فوائد الحديث

  1. ಮುಸ್ಲಿಮರ ನಡುವಿನ ಧಾರ್ಮಿಕ ಸಹೋದರತ್ವದ ಹಕ್ಕುಗಳಲ್ಲಿ ಒಂದರ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
  2. ಅನ್ಯಾಯ ಮಾಡುವವನ ಕೈ ಹಿಡಿಯಬೇಕು (ಅವನನ್ನು ತಡೆಯುವುದು), ಮತ್ತು ಅವನನ್ನು ಅನ್ಯಾಯದಿಂದ ತಡೆಯಬೇಕೆಂದು ತಿಳಿಸಲಾಗಿದೆ.
  3. ಇಸ್ಲಾಂ ಅಜ್ಞಾನ ಕಾಲದ (ಜಾಹಿಲಿಯ್ಯ) ಪರಿಕಲ್ಪನೆಗಳಿಗೆ ವಿರುದ್ಧವಾಗಿದೆ. ಏಕೆಂದರೆ, ಅವರು (ಜಾಹಿಲಿಯ್ಯದ ಜನರು) ತಮ್ಮವರಿಗೆ, ಅವರು ಇತರರ ಮೇಲೆ ಅನ್ಯಾಯ ಮಾಡುವವರಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವರಾಗಿದ್ದರೂ ಪರಸ್ಪರ ಸಹಾಯ ಮಾಡುತ್ತಿದ್ದರು.

عرض الترجمات

36 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
MY မြန်မာ البورمية
TH ไทย التايلندية
PS پښتو بشتو
AS অসমীয়া الأسامية
AM አማርኛ الأمهرية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
RO Română الرومانية
HU Magyar المجرية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية