1. الرئيسية
  2. التصنيفات
  3. ಸದ್ಗುಣಗಳು ಮತ್ತು ನಡವಳಿಕೆಗಳು

حديث ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ

عَنْ أَبِي سَعِيدٍ الخُدْرِيِّ رضي الله عنه أَنَّهُ سَمِعَ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«إِذَا رَأَى أَحَدُكُمُ الرُّؤْيَا يُحِبُّهَا فَإِنَّهَا مِنَ اللَّهِ، فَلْيَحْمَدِ اللَّهَ عَلَيْهَا وَلْيُحَدِّثْ بِهَا، وَإِذَا رَأَى غَيْرَ ذَلِكَ مِمَّا يَكْرَهُ، فَإِنَّمَا هِيَ مِنَ الشَّيْطَانِ، فَلْيَسْتَعِذْ مِنْ شَرِّهَا، وَلاَ يَذْكُرْهَا لِأَحَدٍ، فَإِنَّهَا لَنْ تَضُرَّهُ».

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು:
"ನಿಮ್ಮಲ್ಲಿ ಯಾರಾದರೂ ಅವರು ಇಷ್ಟಪಡುವ ಕನಸನ್ನು ಕಂಡರೆ, ಅದು ಅಲ್ಲಾಹನಿಂದಾಗಿದೆ. ಆದ್ದರಿಂದ ಅವರು ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ ಮತ್ತು ಅದರ ಬಗ್ಗೆ (ಇತರರಿಗೆ) ಹೇಳಲಿ. ಆದರೆ ಅವರು ಅದಲ್ಲದೆ ಅವರಿಗೆ ಇಷ್ಟವಿಲ್ಲದ ಬೇರೆ ಏನಾದರೂ ಕಂಡರೆ, ಅದು ಕೇವಲ ಶೈತಾನನಿಂದಾಗಿದೆ. ಆದ್ದರಿಂದ ಅವರು ಅದರ ಕೆಡುಕಿನಿಂದ ರಕ್ಷಣೆಯನ್ನು ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ."

صحيح رواه البخاري صحيح البخاري - 7045

المعنى الإجمالي

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಳ್ಳೆಯ ಮತ್ತು ಸಂತೋಷದಾಯಕ ಕನಸು ಅಲ್ಲಾಹನಿಂದಾಗಿದೆ. ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಲು ಮತ್ತು ಅದನ್ನು ಇತರರಿಗೆ ತಿಳಿಸಲು ಅವರು ನಿರ್ದೇಶಿಸಿದರು. ಆದರೆ ಒಬ್ಬ ವ್ಯಕ್ತಿ ತಾನು ಇಷ್ಟಪಡದಿರುವ ಮತ್ತು ತನ್ನನ್ನು ಬೇಸರಗೊಳಿಸುವ ಕನಸನ್ನು ಕಂಡರೆ, ಅದು ಶೈತಾನನಿಂದಾಗಿದೆ. ಆದ್ದರಿಂದ, ಅವನು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ ಮತ್ತು ಅದನ್ನು ಯಾರಿಗೂ ತಿಳಿಸದಿರಲಿ. ಹೀಗೆ ಮಾಡಿದರೆ ಅದು ಅವನಿಗೆ ಹಾನಿ ಮಾಡುವುದಿಲ್ಲ. ಅಲ್ಲಾಹು ಈ ವಿಷಯವನ್ನು ಕನಸಿನಿಂದ ಉಂಟಾಗುವ ದುಷ್ಪರಿಣಾಮಕ್ಕೆ ಸುರಕ್ಷತೆಯಾಗಿ ಮಾಡಿದ್ದಾನೆ.

من فوائد الحديث

  1. ಕನಸುಗಳ ವಿಧಗಳು: 1. ಒಳ್ಳೆಯ ಕನಸು. ಇದು ಮನುಷ್ಯನು ಕಾಣುವ ಅಥವಾ ಅವನಿಗೆ ತೋರಿಸಲಾಗುವ ಸತ್ಯ ಕನಸು ಮತ್ತು ಅಲ್ಲಾಹನ ಕಡೆಯ ಶುಭ ಸಮಾಚಾರವಾಗಿದೆ. 2. ಸ್ವತಹ ಮಾತು. ಇದು ಮನುಷ್ಯನು ಎಚ್ಚರವಾಗಿರುವಾಗ ಸ್ವತಹವಾಗಿ ಮಾತನಾಡುವುದು. 3. ಮನುಷ್ಯನನ್ನು ಉದ್ವೇಗಕ್ಕೆ ಒಳಪಡಿಸಲು ಶೈತಾನನು ಉಂಟುಮಾಡುವ ವ್ಯಥೆ, ಭಯ ಮತ್ತು ದಿಗಿಲುಗಳು.
  2. ಉತ್ತಮ ಕನಸಿನ ಬಗ್ಗೆ ಮೇಲೆ ಹೇಳಿರುವುದರ ಸಾರಾಂಶವು ಮೂರು ವಿಷಯಗಳನ್ನು ನೆರವೇರಿಸುವುದಾಗಿದೆ: ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸುವುದು. ಅದಕ್ಕಾಗಿ ಸಂತೋಷಪಡುವುದು ಮತ್ತು ಅದನ್ನು ಇತರರಿಗೆ ತಿಳಿಸುವುದು. ಆದರೆ ಪ್ರೀತಿಸುವವರಿಗೆ ಮಾತ್ರ ತಿಳಿಸುವುದು, ಪ್ರೀತಿಸದವರಿಗೆ ತಿಳಸದಿರುವುದು.
  3. ಕೆಟ್ಟ ಕನಸಿನ ಬಗ್ಗೆ ಮೇಲೆ ಹೇಳಿರುವುದರ ಸಾರಾಂಶವು ಐದು ಶಿಷ್ಟಾಚಾರಗಳನ್ನು ನೆರವೇರಿಸುವುದಾಗಿದೆ: ಅದರ ಕೆಡುಕಿನಿಂದ ಮತ್ತು ಶೈತಾನನ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವುದು. ನಿದ್ರೆಯಿಂದ ಎದ್ದಾಗ ಎಡಕ್ಕೆ ಮೂರು ಬಾರಿ ಲಘುವಾಗಿ ಉಗುಳುವುದು. ಅದನ್ನು ಯಾರಿಗೂ ತಿಳಿಸದಿರುವುದು. ಪುನಃ ನಿದ್ರೆಗೆ ಮರಳಲು ಬಯಸಿದರೆ, ಮೊದಲು ಯಾವ ಬದಿಯಲ್ಲಿ ಮಲಗಿದ್ದನೋ ಆ ಬದಿಯಿಂದ ಇನ್ನೊಂದು ಬದಿಗೆ ಸರಿದು ಮಲಗುವುದು. ಹೀಗೆ ಮಾಡಿದರೆ ಆ ಕನಸು ಹಾನಿ ಮಾಡುವುದಿಲ್ಲ.
  4. ಇಬ್ನ್ ಹಜರ್ ಹೇಳಿದರು: "ಇದರಲ್ಲಿನ ಯುಕ್ತಿಯೇನೆಂದರೆ, ಅವನು ಒಳ್ಳೆಯ ಕನಸನ್ನು ಕಂಡು, ಅದನ್ನು ಅವನು ಇಷ್ಟಪಡದವರಿಗೆ ಹೇಳಿದರೆ, ಅವರು ದ್ವೇಷದಿಂದ ಅಥವಾ ಅಸೂಯೆಯಿಂದ, ಅವನು ಇಷ್ಟಪಡದ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸಬಹುದು. ಆಗ ಅದು ಅವರು ವ್ಯಾಖ್ಯಾನಿಸಿದಂತೆ ಸಂಭವಿಸಬಹುದು ಅಥವಾ ಅವನು ಅದರ ದುಃಖ ಮತ್ತು ವ್ಯಥೆಯಿಂದ ಸ್ವತಃ ಏನಾದರೂ ಮಾಡಲು ಆತುರಪಡಬಹುದು. ಈ ಕಾರಣದಿಂದಲೇ, ಅದನ್ನು ಇಷ್ಟಪಡದವರಿಗೆ ಹೇಳಬಾರದೆಂದು ಆಜ್ಞಾಪಿಸಲಾಗಿದೆ."
  5. ಅನುಗ್ರಹಗಳು ದೊರೆಯುವಾಗ ಮತ್ತು ಅನುಕೂಲತೆಗಳು ನವೀಕರಣವಾಗುವಾಗ ಅಲ್ಲಾಹನನ್ನು ಸ್ತುತಿಸಬೇಕು. ಏಕೆಂದರೆ ಅದು ಅವುಗಳು ಶಾಶ್ವತವಾಗಿ ನೆಲೆನಿಲ್ಲಲು ಕಾರಣವಾಗುತ್ತದೆ.

عرض الترجمات

51 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
UG ئۇيغۇرچە الأيغورية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
TA தமிழ் التاميلية
MY မြန်မာ البورمية
TH ไทย التايلندية
DE Deutsch الألمانية
PS پښتو بشتو
AS অসমীয়া الأسامية
SQ Shqip الألبانية
SV Svenska السويدية
AM አማርኛ الأمهرية
NL Nederlands الهولندية
GU ગુજરાતી الغوجاراتية
NE नेपाली النيبالية
YO Yorùbá اليوروبا
LT Lietuvių الليتوانية
PRS دری الدرية
SR Српски الصربية
TG тоҷикӣ الطاجيكية
RW Kinyarwanda الكينياروندا
RO Română الرومانية
HU Magyar المجرية
MOS Moore الموري
MG Malagasy المالاجاشية
OM Oromoo الأورومو
WO Wolof الولوف
UK Українська الأوكرانية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية