1. الرئيسية
  2. التصنيفات
  3. ಸದ್ಗುಣಗಳು ಮತ್ತು ನಡವಳಿಕೆಗಳು

حديث ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮಾರುಕಟ್ಟೆ ಇದೆ. ಅವರು (ಸ್ವರ್ಗವಾಸಿಗಳು) ಪ್ರತಿ ಶುಕ್ರವಾರ ಅಲ್ಲಿಗೆ ಬರುತ್ತಾರೆ

عَنْ أَنَسِ بْنِ مَالِكٍ رَضيَ اللهُ عنهُ أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«إِنَّ فِي الْجَنَّةِ لَسُوقًا، يَأْتُونَهَا كُلَّ جُمُعَةٍ، فَتَهُبُّ رِيحُ الشَّمَالِ فَتَحْثُو فِي وُجُوهِهِمْ وَثِيَابِهِمْ، فَيَزْدَادُونَ حُسْنًا وَجَمَالًا، فَيَرْجِعُونَ إِلَى أَهْلِيهِمْ وَقَدِ ازْدَادُوا حُسْنًا وَجَمَالًا، فَيَقُولُ لَهُمْ أَهْلُوهُمْ: وَاللهِ لَقَدِ ازْدَدْتُمْ بَعْدَنَا حُسْنًا وَجَمَالًا، فَيَقُولُونَ: وَأَنْتُمْ وَاللهِ لَقَدِ ازْدَدْتُمْ بَعْدَنَا حُسْنًا وَجَمَالًا».

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮಾರುಕಟ್ಟೆ ಇದೆ. ಅವರು (ಸ್ವರ್ಗವಾಸಿಗಳು) ಪ್ರತಿ ಶುಕ್ರವಾರ ಅಲ್ಲಿಗೆ ಬರುತ್ತಾರೆ. ಆಗ ಉತ್ತರದಿಂದ ಗಾಳಿ ಬೀಸಿ, ಅವರ ಮುಖ ಮತ್ತು ವಸ್ತ್ರಗಳ ಮೇಲೆ (ಸುವಾಸನೆಯನ್ನು) ಬೀರುತ್ತದೆ. ಆಗ ಅವರ ಸೌಂದರ್ಯ ಮತ್ತು ಅಂದವು ಹೆಚ್ಚಾಗುತ್ತದೆ. ನಂತರ ಅವರು ಆ ಹೆಚ್ಚಾದ ಸೌಂದರ್ಯ ಮತ್ತು ಅಂದದೊಂದಿಗೆ, ತಮ್ಮ ಕುಟುಂಬದವರ ಬಳಿಗೆ ಹಿಂತಿರುಗಿದಾಗ, ಅವರ ಕುಟುಂಬದವರು ಹೇಳುತ್ತಾರೆ: 'ಅಲ್ಲಾಹನಾಣೆ, ನಮ್ಮ (ನ್ನು ಬಿಟ್ಟುಹೋದ) ನಂತರ ನೀವು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'. ಆಗ ಅವರು ಹೇಳುತ್ತಾರೆ: 'ಮತ್ತು ನೀವೂ ಸಹ, ಅಲ್ಲಾಹನಾಣೆ, (ನಾವು ಬಿಟ್ಟುಹೋದ) ನಂತರ ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'".

صحيح رواه مسلم صحيح مسلم - 2833

المعنى الإجمالي

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದಲ್ಲಿ ಒಂದು ಸ್ಥಳವಿದ್ದು, ಅಲ್ಲಿ ಅವರು (ಸ್ವರ್ಗವಾಸಿಗಳು) ಒಟ್ಟುಗೂಡುತ್ತಾರೆ. ಅಲ್ಲಿ ಯಾವುದೇ ಖರೀದಿ ಅಥವಾ ಮಾರಾಟವಿರುವುದಿಲ್ಲ. ಅಲ್ಲಿ ಅವರು ತಮಗೆ ಬೇಕಾದುದನ್ನು ತೆಗೆದುಕೊಳ್ಳುತ್ತಾರೆ. ಅವರು ಅಥವಾ ಪ್ರತಿ ವಾರಕ್ಕೊಮ್ಮೆ ಅಲ್ಲಿಗೆ ಬರುತ್ತಾರೆ. ಆಗ ಉತ್ತರದಿಂದ ಗಾಳಿ ಬೀಸುತ್ತದೆ. ಅದು ಅವರ ಮುಖ ಮತ್ತು ವಸ್ತ್ರಗಳನ್ನು ಅಲುಗಾಡಿಸುತ್ತದೆ. ಆಗ ಅವರು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ನಂತರ ಅವರು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡ ಸ್ಥಿತಿಯಲ್ಲಿ ತಮ್ಮ ಕುಟುಂಬದವರ ಬಳಿಗೆ ಹಿಂತಿರುಗುತ್ತಾರೆ. ಆಗ ಅವರ ಕುಟುಂಬದವರು ಹೇಳುತ್ತಾರೆ: 'ಅಲ್ಲಾಹನಾಣೆ, ನಮ್ಮ ನಂತರ ನೀವು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'. ಆಗ ಅವರು ಹೇಳುತ್ತಾರೆ: 'ಮತ್ತು ನೀವೂ ಸಹ, ಅಲ್ಲಾಹನಾಣೆ, ನಮ್ಮ ನಂತರ ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'.

من فوائد الحديث

  1. ಸ್ವರ್ಗವಾಸಿಗಳ ಸೌಂದರ್ಯ ಮತ್ತು ಅಂದವು ನಿರಂತರ ಹೆಚ್ಚುತ್ತಿರುತ್ತದೆ ಎಂದು ವಿವರಿಸಲಾಗಿದೆ.
  2. ಈ ಹದೀಸ್‌ಗಳು (ಮತ್ತು ಇಂತಹುದೇ ಹದೀಸ್‌ಗಳು) ಮನುಷ್ಯನಿಗೆ ಆ ನಿವಾಸವನ್ನು (ಸ್ವರ್ಗವನ್ನು) ತಲುಪಿಸುವ ಸತ್ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸುತ್ತವೆ.
  3. ವಿಶೇಷವಾಗಿ ಉತ್ತರದಿಂದ ಬೀಸುವ ಗಾಳಿಯನ್ನು ತಿಳಿಸಲಾಗಿದೆ. ಏಕೆಂದರೆ ಅದು ಅರಬ್ಬರ ದೃಷ್ಟಿಯಲ್ಲಿ ಅತ್ಯುತ್ತಮ ಗಾಳಿಯಾಗಿತ್ತು. ಅದು ಒಳಿತು ಮತ್ತು ಮಳೆಯನ್ನು ತರುತ್ತಿತ್ತು.
  4. ಸ್ವರ್ಗ ಮತ್ತು ಅದರ ಅನುಗ್ರಹಗಳ ಬಗ್ಗೆ ಉತ್ತೇಜನ ನೀಡುವುದರ ಮೂಲಕ ಅಲ್ಲಾಹನ ಕಡೆಗೆ ಆಹ್ವಾನಿಸಲು ಪ್ರೋತ್ಸಾಹಿಸಲಾಗಿದೆ.

عرض الترجمات

40 اللغة
EN English الإنجليزية
UR اردو الأوردية
ES Español الإسبانية
ID Indonesia الإندونيسية
BN বাংলা البنغالية
TR Türkçe التركية
RU Русский الروسية
BS Bosanski البوسنية
SI සිංහල السنهالية
HI हिन्दी الهندية
ZH 中文 الصينية
FA فارسی الفارسية
VI Tiếng Việt الفيتنامية
TL Tagalog تجالوج
KU Kurdî الكردية
HA Hausa الهوسا
PT Português البرتغالية
ML മലയാളം المليالم
TE తెలుగు التلغو
SW Kiswahili السواحيلية
MY မြန်မာ البورمية
TH ไทย التايلندية
PS پښتو بشتو
AS অসমীয়া الأسامية
SQ Shqip الألبانية
AM አማርኛ الأمهرية
NL Nederlands الهولندية
GU ગુજરાતી الغوجاراتية
PRS دری الدرية
SR Српски الصربية
TG тоҷикӣ الطاجيكية
RO Română الرومانية
HU Magyar المجرية
MOS Moore الموري
UK Українська الأوكرانية
KA ქართული الجورجية
MK Македонски المقدونية
KM ភាសាខ្មែរ الخميرية
PA ਪੰਜਾਬੀ البنجابية
MR मराठी الماراثية